ಬೀದರ್: ನಗರದಲ್ಲಿ ಸಂಭ್ರಮದಿಂದ ಜರುಗಿದ ರಾಮಲೀಲಾ ಉತ್ಸವ
Bidar, Bidar | Oct 2, 2025 ಬೀದರನಲ್ಲಿ ರಾಮಲೀಲಾ ಉತ್ಸವ ಸಮಿತಿ ವತಿಯಿಂದ ಇಂದು ರಾತ್ರಿ ಎಂಟು ಗಂಟೆಗೆ ರಾಮಲೀಲಾ ಉತ್ಸವ ಹಾಗೂ ರಾವಣ ದಹನ ಕಾರ್ಯಕ್ರಮ ಜರುಗಿತು. ಉತ್ಸವ ಸಮಿತಿ ಅಧ್ಯಕ್ಷ ಈಶ್ವರಸಿಂಗ್ ಠಾಕೂರ್ ಮಾತನಾಡಿ ಈ ಬಾರಿಯ ರಾಮಲೀಲಾ ಉತ್ಸವದ ವೇದಿಕೆ RSS ಸಂಘಟನೆ ನೂರು ವರ್ಷ ಪೂರೈಸಿದ ಪ್ರಯುಕ್ತ ಕಾರ್ಯಕರ್ತರಿಗೆ ಹಾಗೂ ಸಿಂಧೂರ ಆಪರೇಷನ್ ಗೆ ಸಮರ್ಪಣೆ ಮಾಡಲಾಗಿದೆ ಎಂದರು. ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ ವಿಜಯ ದಶಮಿ ಹಬ್ಬ ಅಸತ್ಯವನ್ನು ಓಡಿಸಿ, ಸತ್ಯ ಗೆದ್ದ ದಿನ. ಅಧರ್ಮ ಓಡಿಸಿ ಧರ್ಮದ ಗೆಲುವಾಗಿದೆ ಎಂದರು