ದೇವನಹಳ್ಳಿ ಕೇಂದ್ರ ಸರಕಾರ, ಸಚಿವಾಲಯಗಳು,ಇಲಾಖೆ, ಕೈಗಾರಿಕೆಗಳು ಮತ್ತು ಇತರೆ ಸಂಸ್ಥೆಗಳ ಸಮಸ್ಯೆಗಳನ್ನು ಪರಿಹರಿಸಲು ವಿದ್ಯಾರ್ಥಿಗಳಿಗೆ ಮುಕ್ತ ವೇದಿಕೆಯನ್ನು ಸೃಷ್ಟಿಸುತ್ತಿರುವ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-೨೦೨೫ರ ೮ನೇ ಆವೃತ್ತಿಯಲ್ಲಿಯೂ ಕೂಡ ನಾಗಾರ್ಜುನ ತಾಂತ್ರಿಕ ಕಾಲೇಜು ಆತಿಥ್ಯ ವಹಿಸಲಿದೆ ಎಂದು ಪ್ರಾಂಶುಪಾಲ ಡಾ.ತಿಪ್ಪೇಸ್ವಾಮಿ ತಿಳಿಸಿದರು. ನಗರ ಹೊರವಲಯ ನಾರ್ಗಾರ್ಜುನ ತಾಂತ್ರಿಕ ಶಿಕ್ಷಣ ಸಮೂಹ ಸಂಸ್ಥೆಗಳ ಕ್ಯಾಂಪಸ್ನಲ್ಲಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-೨೦೨೫ ಆತಿಥ್ಯ ಸಂಬAಧ ಏರ್ಪಡಿಸಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ನಾಗಾರ್ಜುನ ನೋಡಲ್ ಕೇಂದ್ರ