ಕಮಲನಗರ: ಮುರ್ಕಿಯಲ್ಲಿ ರೇಣುಕಾ ದೇವಿ ದೇವಸ್ಥಾನದಲ್ಲಿ ಕಳಸಾರೋಹಣ ಶಾಸಕ ಪ್ರಭು ಚೌಹಾಣ ಭಾಗಿ
ತಾಲೂಕಿನ ಇತಿಹಾಸ ಪ್ರಸಿದ್ಧ ಮುರ್ಕಿಯಲ್ಲಿ ಬುಧವಾರ ಮಧ್ಯಾಹ್ನ 2ಕ್ಕೆ ರೇಣುಕಾದೇವಿ ದೇವಸ್ಥಾನದ ಕಳಸರೋಣ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಕ್ಷೇತ್ರದ ಶಾಸಕ ಪ್ರಭು ಚೌಹಾಣ್ ಸೇರಿದಂತೆ ಅನೇಕ ಜನ ಗಣ್ಯರು ಪೂಜ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ನೂರಾರು ಸಂಖ್ಯೆಯ ಮಾತೆಯರು ತುಂಬಿದ ಕಳಶ ಹೊತ್ತು ನಡೆಸಿದ ಶೋಭಯಾತ್ರೆ ಗಮನ ಸೆಳೆಯಿತು.