ದಾಂಡೇಲಿ: ಕೆಡಿಸಿಸಿ ಬ್ಯಾಂಕಿನ ಅಂಬೇವಾಡಿ ಶಾಖೆಯ ಕಟ್ಟಡದಲ್ಲಿ ಪ್ರತ್ಯಕ್ಷವಾದ ಕೊಳಕಮಂಡಲ ಹಾವು
ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ಕೆಡಿಸಿಸಿ ಬ್ಯಾಂಕಿನ ಕಟ್ಟಡದ ಹೊರ ಭಾಗದಲ್ಲಿ ವಿಷಕಾರಿಯಾದ ಕೊಳಕಮಂಡಲ ಹಾವೊಂದು ಪ್ರತ್ಯಕ್ಷವಾಗಿರುವ ಬಗ್ಗೆ ಶುಕ್ರವಾರ ಸಂಜೆ 7:30 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಅತ್ಯಂತ ವಿಷಕಾರಿಯಾದ ಈ ಹಾವನ್ನು ನೋಡಿದ ಸ್ಥಳೀಯರು ಈ ಬಗ್ಗೆ ಸ್ಥಳೀಯ ಉರಗ ಪ್ರೇಮಿಗೆ ಮಾಹಿತಿಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.