ಶಿರಸಿ : ನಗರದ ಕೆರೆಗುಂಡಿ ರಾಜಕಾಲುವೆಯ ಕಸವನ್ನು ತೆಗೆದು ರಸ್ತೆ ಮೇಲೆ ಹಾಕಿ ನರಕ ಮಾಡಿದ ಶಿರಸಿ ನಗರಸಭೆಯ ಘನಂದಾರಿ ಕಾರ್ಯವೈಖರಿಯ ಬಗ್ಗೆ ಸ್ಥಳೀಯವಾಗಿ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಭಾನುವಾರ ಸಂಜೆ 5:30 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಕಳೆದ 15 ದಿನಗಳ ಹಿಂದೆಯೇ ಕೆರೆಗುಂಡಿ ರಾಜಕಾಲುವೆಯ ಕಸವನ್ನು ನಗರಸಭೆ ವಿಲೇವಾರಿ ಮಾಡಿ, ಆ ಕಸವನ್ನು ಅಲ್ಲೇ ರಸ್ತೆಯ ಮೇಲೆ ಹಾಕಿ, ಅಲ್ಲಿಂದ ಅದನ್ನು ತೆಗೆಯದೆ ಇರುವುದರಿಂದ ಸ್ಥಳೀಯವಾಗಿ ದುರ್ವಾಸನೆ ಬೀರತೊಡಗಿದ್ದು, ಸ್ಥಳೀಯ ಜನತೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ ಸಾಧ್ಯತೆ ಇದೆ.