ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜನ್ರಿಗೆ ನಿದ್ದೆ ಕೆಡಿಸುತ್ತಿರುವ ಚಡ್ಡಿ ಗ್ಯಾಂಗ್ ನಗರದ ಜಿಲ್ಲಾಸ್ಪತ್ರೆ ಮುಂಭಾಗದ ವಾರ್ಡ್ ನಲ್ಲಿ ಓಡಾಡಿದ ಚಡ್ಡಿ ಗ್ಯಾಂಗ್
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳು ಆರಂಭದಿಂದ ಕ್ರೈಂ ರೇಟ್ ಜಾಸ್ತಿಯಾಗುತ್ತಾ ಬಂದಿದೆ.. ಗುಂಪು ಘರ್ಷಣೆ, ಕಳ್ಳತನ, ಹಿಂಸಾಚಾರ, ಕೊಲೆ ಇತ್ಯಾದಿ ಕಾನೂನು ಬಾಹಿರ ಪ್ರಕರಣಗಳು ಹೆಚ್ಚು ದಾಖಲಾಗಿವೆ.. ಅದರಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸರಣಿ ಕಳ್ಳತನಗಳ ಪ್ರಕರಣಗಳು ಸಾರ್ವಜನಿಕರ ನಿದ್ದೆ ಕೆಡಿಸುವಂತೆ ಮಾಡಿತ್ತು.. ಆದ್ರೆ ಈಗ ಚಿಕ್ಕಬಳ್ಳಾಪುರದಲ್ಲಿ ಡಕಾಯಿತ ಚಂಡಿ ಗ್ಯಾಂಗ್ ಎಂಟ್ರಿ ಕೊಟ್ಟಿದೆಯಂತೆ.. ಚಿಕ್ಕಬಳ್ಳಾಪುರ ನಗರದಲ್ಲಿ ಮಿಡ್ ನೈಟ್ ಭಯಂಕರವಾಗಿರುವ ಚಡ್ಡಿ ಗ್ಯಾಂಗ್ ಕೈಯಲ್ಲಿ ಆಯುಧಗಳನ್ನು ಹಿಡಿದು ಸಂಚಾರ ಮಾಡ್ತಿದ್ದಾರಂತೆ..