ಶಿರಸಿ: ಗೋಣಸರದ ಹೊಂಡವೊಂದರಲ್ಲಿ ಬಿದ್ದು ಮೃತಪಟ್ಟ ವ್ಯಕ್ತಿಯ ಶವ ಪತ್ತೆ, ಶವ ಪತ್ತೆ ಹಚ್ಚಿದ ಶ್ರೀ ಮಾರಿಕಾಂಬಾ ಲೈಪ್ ಗಾರ್ಡ್ ತಂಡ
ಶಿರಸಿ : ತಾಲೂಕಿನ ಗೋಣಸರದ ಹೊಂಡವೊಂದರಲ್ಲಿ ಬಿದ್ದಿದ್ದ ವ್ಯಕ್ತಿಯ ಮೃತದೇಹವನ್ನು ಶ್ರೀ ಮಾರಿಕಾಂಬಾ ಲೈಫ್ ಗಾರ್ಡ್ ತಂಡ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಸ್ಥಳೀಯ ನಿವಾಸಿ ಸುಬ್ಬ ದೇವು ಗೌಡ ಎಂಬವರೇ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇಂದು ಸೋಮವಾರ ಸಂಜೆ 4:00 ಗಂಟೆ ಸುಮಾರಿಗೆ ಮೃತದೇಹವನ್ನು ಪತ್ತೆ ಹಚ್ಚಿ ಹೊರತೆಗೆಯುವಲ್ಲಿ ಮುಳುಗು ತಜ್ಞ ಗೋಪಾಲ ಗೌಡಾ ನೇತೃತ್ವದ ಶ್ರೀ ಮಾರಿಕಾಂಬಾ ಲೈಫ್ ಗಾರ್ಡ್ ತಂಡ ಯಶಸ್ವಿಯಾಗಿದೆ. ಶ್ರೀ ಮಾರಿಕಾಂಬಾ ಲೈಫಗಾರ್ಡ್ ತಂಡದ ಈ ಕಾರ್ಯಾಚರಣೆಯಲ್ಲಿ ಗೋಪಾಲ್ ಗೌಡ, ದಿವಾಕರ ಹುಲೇಕಲ್ , ಪ್ರದೀಪ್ ಎಸಳೆ, ತಿರುಮಲ ಮಡಿವಾಳ, ಹರ್ಷ ಮಡಿವಾಳ ಭಾಗವಹಿಸಿದ್ದರು.