ಗೌರಿಬಿದನೂರು: ದ್ಯಾವಪ್ಪನ ಕೆರೆಯ ಮಿನಿ ಡ್ಯಾಮ್ ನಿರ್ಮಾಣಕ್ಕೆ ಮಾಜಿ ಕೃಷಿ ಸಚಿವ ಎನ್.ಹೆಚ್. ಶಿವಶಂಕರರೆಡ್ಡಿ ಸಣ್ಣನೀರಾವರಿ ಸಚಿವರಾದ ಎನ್.ಎಸ್.ಬೋಸರಾಜು ಭೇಟಿ
ಗೌರಿಬಿದನೂರು : ಅಲಕಾಪುರ ಬೆಟ್ಟ, ಗುಡ್ಡಗಳ ಮಧ್ಯೆದ್ಯಾವಪ್ಪನ ಕೆರೆಯಿದ್ದು, ನಗರಕ್ಕೆ ಕೇವಲ 6ಕಿ.ಮೀ ದೂರದಲ್ಲಿದೆ. ಇಲ್ಲಿ ಸರ್ಕಾರ ಮಿನಿ ಡ್ಯಾಮ್ ನಿರ್ಮಿಸಿದರೆ ನಗರ ಹಾಗೂ ಕೆರೆ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲವಾಗಲೆಂದು ದ್ಯಾವಪ್ಪನ ಕೆರೆಯ ಬಳಿ ಮಿನಿ ಡ್ಯಾಮ್ ನಿರ್ಮಾಣಕ್ಕಾಗಿ ಮಾಜಿ ಕೃಷಿ ಸಚಿವರು ಹಾಗೂ ಹಾಲಿ ಹೆಚ್. ಎನ್ .ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಎನ್.ಹೆಚ್. ಶಿವಶಂಕರ ರೆಡ್ಡಿ, ಅಖಿಲ ಕರ್ನಾಟಕ ರೈತ ಸಂಘಟನೆ ಮತ್ತು ಕರವೇ ಸಂಘಟನೆಗಳು ಸೋಮವಾರ ಸಣ್ಣನೀರಾವರಿ ಸಚಿವರಾದ ಎನ್ .ಎಸ್. ಬೋಸರಾಜು ರವರನ್ನು ಬೇಟಿಮಾಟಿ ಮನವಿ ಪತ್ರವನ್ನು ಸಲ್ಲಿಸಿದರು.