ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ವತಿಯಿಂದ ಸ್ವಚ್ಛ, ಪ್ರಾಮಾಣಿಕ, ಜನಪರ ಎದ್ದೇಳು ಕನ್ನಡಿಗ ಸಮೃದ್ಧ ಕರ್ನಾಟಕ ಕಟ್ಟಲು KRS ಪಕ್ಷ ಸೇರು ಬಾ ಶಕ್ತಿ, ಚೈತನ್ಯ ಪಡೆಯಲು ನಗರದ ಅಂಬೇಡ್ಕರ್ ವೃತ್ತದ ಡಾ// ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಅಂಬೇಡ್ಕರ್ ವೃತ್ತದಿಂದ ಗವಾನ್ ಚೌಕ್, ಚೌಬಾರಾ, ಬಸವೇಶ್ವರ ವೃತ್ತ, ಭಗತ್ ಸಿಂಗ್ ವೃತ್ತದ ಮೂಲಕ ಅಂಬೇಡ್ಕರ್ ವೃತ್ತದವರೆಗೆ ರ್ಯಾಲಿ (ಜಾತಾ) ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ KRS ಪಕ್ಷದ ರಾಜ್ಯ ರೈತ ಘಟಕದ ಕಾರ್ಯದರ್ಶಿಗಳಾದ ನಿರೂಪ ಕೆ. ಗೊಮರ್ಷಿ ಅವರು ಮಾದ್ಯಮದೊಂದಿಗೆ ಮಾತನಾಡಿದರು.