ದೇವದುರ್ಗ: ದೇವದುರ್ಗ : ಗಾಂಧಿಜೀಗೆ ಈ ದೇಶದಲ್ಲಿ ಹೊಡೆದಿದ್ದಾರೆ, ಸಂತೋಷ ಲಾಡ್
ಸಚಿವ ಪ್ರಿಯಾಂಕ ಖರ್ಗೆ ಬೆದರಿಕೆ ಕರೆ ವಿಚಾರ ದೇವದುರ್ಗದಲ್ಲಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾಧ್ಯಮದೊಂದಿಗೆ ಮಾತನಾಡುತ್ತಾ, ಗಾಂಧಿಜೀಗೆ ಈ ದೇಶದಲ್ಲಿ ಹೊಡೆದಿದ್ದಾರೆ, ಸಾರ್ವಜನಿಕರ ಜೀವನದಲ್ಲಿ ಎಲ್ಲವನ್ನೂಎದುರಿಸಬೇಕಾಗುತ್ತೆ. ಪ್ರಿಯಾಂಕ ಖರ್ಗೆ ಅವರು ಒಬ್ಬರೇ ಇಲ್ಲ ನಾವು ಇದ್ದೇವೆ, ಇಡೀ ಒರಿಜಿನಲ್ ಹಿಂದೂಗಳೆಲ್ಲ ಪ್ರಿಯಾಂಕ ಖರ್ಗೆ ಜೊತೆಗಿದ್ದೀವಿ. ಡುಪ್ಲಿಕೇಟ್ ಹಿಂದೂಗಳಿಲ್ಲ, ಒರಿಜಿನಲ್ ಹಿಂದೂಗಳಿದ್ದೇವೆ. ಕಾಂಗ್ರೆಸ್ ಪಾರ್ಟಿನೂ ಅವರ ಜೊತೆಗೆ ಇದೆ. ಯಾವುದೇ ಬೆದರಿಕೆ ಬಂದೂ ನಾವು ಹೆದರಲ್ಲ ಎಂದ ಸಚಿವ ಸಂತೋಷ ಲಾಡ್ ಹೇಳಿದರು.