ಹುನಗುಂದ: ಪಂಚಮಸಾಲಿ ಸ್ವಾಮೀಜಿಯವರೊಂದಿಗೆ ಅಖಂಡ ಬಂಡೆಯಂತೆ ನಿಂತಿದ್ದೇವೆ, ಕೂಡಲಸಂಗಮದಲ್ಲಿ ಮಾಜಿ ಸಚಿವ ಸಿ.ಸಿ.ಪಾಟೀಲ್
ಸ್ವಾಮೀಜಿಯವರ ಬೆನ್ನಿಗೆ ಅಖಂಡ ಬಂಡೆಯಂತೆ ನಿಂತಿದ್ದೇವೆ ಎಂದು ಮಾಜಿ ಸಚಿವ ಸಿಸಿ ಪಾಟೀಲ್ ಅವರು ಹೇಳಿದ್ದಾರೆ. ಕೂಡಲಸಂಗಮದಲ್ಲಿ ಪಂಚಮಸಾಲಿ ಪೀಠದಿಂದ ಉಚ್ಛಾಟನೆಗೊಂಡಿರುವ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ಜೊತೆ ನಡೆದ ಸಭೆ ಬಳಿಕ ಮಾತನಾಡಿದ ಅವರು,ನಾವು ಸ್ವಾಮೀಜಿ ಅವರಿಗೆ ನೈತಿಕ ಬೆಂಬಲ ನೀಡಿದ್ದೇವೆ.ಮುಂದಿನ ದಿನಮಾನಗಳಲ್ಲಿ ರಾಜ್ಯ ಮಟ್ಟದ ಸಮಾವೇಶದ ಮೂಲಕ ಸಮಾಜದ ಎಲ್ಲ ಗಣ್ಯರನ್ನ ಸೇರಿಕೊಂಡು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.