ಮಂಡ್ಯ: ಗೊರವಾಲೆ ಬಳಿ ಹುಲಿಯೊಂದು ಕೃಷಿ ಕೆಲಸಗಾರನ ಮೇಲೆ ದಾಳಿ, ಗಂಭೀರ ಗಾಯ
Mandya, Mandya | Oct 8, 2025 ಹುಲಿಯೊಂದು ಕೃಷಿ ಕೆಲಸಗಾರನ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಮಂಡ್ಯ ತಾಲ್ಲೂಕಿನ ಗೊರವಾಲೆ ಬಳಿ ಬುಧವಾರ ಬೆಳಿಗ್ಗೆ 7.45 ರ ಸಮಯದಲ್ಲಿ ನಡೆದಿದೆ. ಹುಲಿ ದಾಳಿಯಿಂದ ಕೃಷಿ ಕೆಲಸಗಾರ 60 ವರ್ಷದ ತಿರುಮಲೆ ಎಂಬ ವ್ಯಕ್ತಿ ಗಾಯಗೊಂಡಿದ್ದು, ಸದ್ಯ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಲಿ ದಾಳಿಯಿಂದ ತಿರುಮಲೆ ಅವರ ಬಲ ತೊಡೆ, ಬಲಗೈ ಮೇಲೆ ರಕ್ತಸಿಕ್ತ ಗಾಯಗಳು ಉಂಟಾಗಿವೆ. ಸ್ಥಳೀಯರ ತೋಟವೊಂದರಲ್ಲಿ ಸುಮಾರು 15 ವರ್ಷದಿಂದ ಕೆಲಸ ನಿರ್ವಹಿಸುತ್ತಿರುವ ತಿರುಮಲೆ ಮಂಗಳವಾರ ಬೆಳಿಗ್ಗೆ 7.45 ಸಮಯದಲ್ಲಿ ಆಡುಗಳಿಗೆ ಸೊಪ್ಪು ಕತ್ತರಿಸುತ್ತಿದ್ದಾಗ, ಏಕಾಏಕಿ ಹುಲಿ ದಾಳಿ ನಡೆಸಿದೆ, ಇದರಿಂದಾಗಿ ಗಾಬರಿಗೊಂಡ ತಿರುಮಲೆ, ಕ