ದೇವನಹಳ್ಳಿ: ನಾನು ಕನ್ನಡ ಮಾತನಾಡಲ್ಲ; ದೇವನಹಳ್ಳಿ ಟೋಲ್‌ಗೇಟ್ ಮ್ಯಾನೇಜರ್ ದರ್ಪ!
ಕನ್ನಡ ಮಾತನಾಡಲು ಹೆದ್ದಾರಿ ಟೋಲ್‌ಗೇಟ್ ಮ್ಯಾನೇಜರ್ ನಿರಾಕರಿಸಿರುವ ಘಟನೆ ರಾಜಧಾನಿ ಬೆಂಗಳೂರಿನ ಹೊರವಲಯದ ದೇವನಹಳ್ಳಿ ತಾಲೂಕಿನ ನಲ್ಲೂರಿನ ಟೋಲ್‌ಗೇಟ್‌ನಲ್ಲಿ (Devanahalli toll plaza) ನಡೆದಿದ್ದು, ಇದಕ್ಕೆ ಸ್ಥಳೀಯ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ. "ಕನ್ನಡ ಕಲಿಯಲ್ಲ, ಇದು ನ್ಯಾಷನಲ್ ಹೈವೇ, ನಾನು ಕನ್ನಡ ಯಾಕೆ ಮಾತನಾಡಬೇಕು ಎಂದು ದರ್ಪದಿಂದ ಮಾತನಾಡುವ ಮೂಲಕ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದಾರೆ.