ಕಲಬುರಗಿ : ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಂದ ಮೋಜು ಮಸ್ತಿ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ನಡೆಸಲು ಜನವರಿ 3 ರಂದು ಕಲಬುರಗಿ ಸೆಂಟ್ರಲ್ ಜೈಲಿಗೆ ಕಾರಾಗೃಹ ಇಲಾಖೆ ಎಡಿಜಿಪಿ ಪಿ.ವಿ ಆನಂದರೆಡ್ಡಿ ಆಗಮಿಸಿ ತನಿಖೆ ಕೈಗೊಳ್ಳಲಿದ್ದಾರೆ.. ಡಿ1 ರಂದು ರಾತ್ರಿ 9 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಇನ್ನೂ ಕೈದಿಗಳು ಸೇರಿಕೊಂಡು ಇಸ್ಪಿಟ್ ಆಡ್ತಾ, ಎಣ್ಣೆ ಹೊಡೆಯುತ್ತಾ, ಸಿಗರೇಟ್ ಸೇದುತ್ತಾ ಮಸ್ತ್ ಮಜಾ ಮಾಡ್ತಾಯಿರೋ ವಿಡಿಯೋ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಹಿನ್ನಲೆ ಕಾರಾಗೃಹಕ್ಕೆ ಎಡಿಜಿಪಿ ಭೇಟಿ ನೀಡಿ ಜೈಲಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ