ಶಿರಸಿ: ಬನವಾಸಿ ಹಾಗೂ ಸಿದ್ದಾಪುರ ಸಾಗರ ಜಿಲ್ಲೆಗೆ ಸೇರ್ಪಡೆ ತಿರುಕನ ಕನಸು:ನಗರದಲ್ಲಿ ಶಾಸಕ ಶಿವರಾಮ ಹೆಬ್ಬಾರ
ಶಿರಸಿ ನಗರದಲ್ಲಿ ಮಂಗಳವಾರ ಸಂಜೆ 3.40 ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಿದ್ದಾಪುರ ಹಾಗೂ ಬನವಾಸಿ ಬೇರೆ ಜಿಲ್ಲೆಗೆ ಹೋಗುತ್ತದೆ ಎಂದು ಹೇಳುವುದು ತಿರುಕನ ಕನಸು. ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಸರ್ಕಾರದ ಮುಂದೆ ಶಾಸಕರ ಮುಂದೆಯಾವ ಹಂತದಲ್ಲೂ ಚರ್ಚೆಯಾಗಿಲ್ಲ. ನನ್ನ ಕ್ಷೇತ್ರದ ಬನವಾಸಿ ಭಾಗದ ಜನರು ಯಾರೂ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದರು.