ತಿಕೋಟಾ: ದಲಿತರು ಜಾತಿ ಗಣತಿಯ ವೇಳೆ ಧರ್ಮವನ್ನು ಬೌದ್ದ ಎಂದು ಬರೆಯಿಸಿ : ನಗರದಲ್ಲಿ ದಲಿತ ಮುಖಂಡರ ಹೇಳಿಕೆ
ಸರ್ಕಾರ ಈಗ ಮಾಡುತ್ತಿರುವ ಜಾತಿ ಗಣತಿಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ, ಧರ್ಮದ ಕಾಲಂ ನಲ್ಲಿ ಬೌದ್ದ ಎಂದು ಬರೆಸಬೇಕು ಎಂದು ಬಸವರಾಜ್ ಚಲವಾದಿ ಹೇಳಿದರು. ಈ ಕುರಿತು ವಿಜಯಪುರ ನಗರದಲ್ಲಿ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ಬೌದ್ದ ಮಹಾಸಭಾದ ಅಧ್ಯಕ್ಷ ಬಸವರಾಜ್ ಚಲವಾದಿ ಮಾತನಾಡುತ್ತಾ, ಹಿಂದುಳಿದ ವರ್ಗಗಳ ಆಯೋಗವು ದಿನಾಂಕ 22.09.2025 ರಿಂದ 07.10.2025 ರ ವರೆಗೆ ನಡೆಸುವಂತಹ ಜಾತಿ ಜನಗಣತಿ ಇದಾಗಿದೆ ಎಂದರು...