ಬೆಂಗಳೂರು ಉತ್ತರ: ರಜೆ ಮುಗಿಯುತ್ತಿದ್ದಂತೆ ಶಾಲೆ ಆರಂಭ; ಸಚಿವ ಮಧು ಬಂಗಾರಪ್ಪ ಮಹತ್ವದ ಹೇಳಿಕೆ!
ಜಾತಿಗಣತಿ ಸಮೀಕ್ಷೆಯ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ತಾಂತ್ರಿಕ ಸಮಸ್ಯೆಗಳು ಸ್ವಾಭಾವಿಕ, ಆದರೆ ಬ್ಯಾಕಪ್ ವ್ಯವಸ್ಥೆ ಇದೆ. ಸಮೀಕ್ಷೆಯಲ್ಲಿ ಜನರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಸಮೀಕ್ಷೆಗೆ ಶಿಕ್ಷಕರನ್ನು ದಸರಾ ರಜೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಆದರೆ ಬಿಜೆಪಿಯವರು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರನ್ನು ಬಳಸದೆ ಬೇರೆ ಪರ್ಯಾಯ ಇಲ್ಲ ಎಂದಿದ್ದಾರೆ.ಬಂಗಾರಪ್ಪನವರ ಕಾಲದಲ್ಲಿ ಕನ್ನಡ ಶಾಲೆಗಳಿಗೆ ಅನುದಾನ ನೀಡಲಾಗಿತ್ತು. ರಾಜ್ಯಾದ್ಯಂತ ಕನ್ನಡ ಶಾಲೆಗಳನ್ನು ಉಳಿಸುವ ಕೆಲಸವನ್ನು ಮುಂದುವರೆಸುತ್ತೇವೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಿಗೆ ಸಮಾನ ಪ್ರಾಮುಖ್ಯತೆ ನೀಡುತ್ತೇವೆ ಸಚಿವ ಮಧು ಬಂಗಾರಪ್ಪ ಎಂದು ಭರವಸೆ ನೀಡಿದ್ದಾರೆ