ಗುಂಡ್ಲುಪೇಟೆ: ಇಂಗಲವಾಡಿ, ಅಗತಗೌಡನಹಳ್ಳಿಯಲ್ಲಿ ಹುಲಿ ಸೆರೆ ಕಾರ್ಯಾಚರಣೆ: ಸಾಕಾನೆ ಪಾರ್ಥಸಾರಥಿ ಯಿಂದ ಕೂಂಬಿಂಗ್
ಗುಂಡ್ಲುಪೇಟೆ ತಾಲೂಕಿನಲ್ಲಿ ಹುಲಿ ಹಾವಳಿ ಹೆಚ್ಚಳವಾದ ಹಿನ್ನೆಲೆ ಅಗತಗೌಡನಹಳ್ಳಿ ಹಾಗೂ ಇಂಗಲವಾಡಿಯಲ್ಲಿ ಹಿನ್ನೆಲೆ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಭಾನುವಾರ ಹುಲಿ ಸೆರೆ ಕಾರ್ಯಾಚರಣೆ ನಡೆಸಿದರು. ಎಸಿಎಫ್ ಸುರೇಶ್ ನೇತೃತ್ವದಲ್ಲಿ ಸಾಕಾನೆ ಪಾರ್ಥಸಾರತಿ ಬಳಕೆ ಮಾಡಿಕೊಂಡು ಸುಮಾರು 20ಕ್ಕೂ ಅಧಿಕ ಅರಣ್ಯ ಸಿಬ್ಬಂದಿ ತಂಡ ಅಗತಗೌಡನಹಳ್ಳಿ ಜಮೀನುಗಳ ಸುತ್ತಮುತ್ತ ಹಾಗೂ ಅರಣ್ಯ ಪ್ರದೇಶದಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆಸಿದರು. ಆದರೂ ಕೂಡ ಹುಲಿ ಸುಳಿವು ದೊರೆಯಲಿಲ್ಲ. ಬಳಿಕ, ಇಂಗಲವಾಡಿ ಗ್ರಾಮದ ಸುತ್ತಮುತ್ತಲು ಕೂಡ ಕಾರ್ಯಾಚರಣೆ ನಡೆಸಲಾಗುತ್ತಿದೆ.