ಕಲಘಟಗಿ: ಕಲಘಟಗಿ ತಾಲೂಕಿನ ಗಂಬ್ಯಾಪುರ ಗ್ರಾಮದ ನೀರಸಾಗರ ಕೆರೆಯ ಪಕ್ಕದ ಐನಾರ್ ಗುಂಡಿಯಲ್ಲಿ ಯುವಕನೋರ್ವ ಗೆಳೆಯರ ಜೊತೆ ಈಜಲು ಹೋಗಿ ಮೃತಪಟ್ಟ ಘಟನೆ
ಕಲಘಟಗಿ ತಾಲ್ಲೂಕಿನ ಗಂಬ್ಯಾಪುರ ಗ್ರಾಮದ ನೀರಸಾಗರ ಕೆರೆಯ ಪಕ್ಕದ ಐನಾರ್ ಗುಂಡಿಯಲ್ಲಿ ಯುವಕನೋರ್ವ ಗೆಳೆಯರ ಜೊತೆ ಈಜಲು ಹೋಗಿ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ. ಹಳೆ ಹುಬ್ಬಳ್ಳಿ ನಿವಾಸಿ ಜಾಫರ್ ಮೊಮ್ಮದ್ ಅಲಿ ತಾಂಬೋಲಿ ವಯಾ(21) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ಧಳದವರು ಭೇಟಿ ನೀಡಿ ನಿರಂತರ ಮೂರು ಗಂಟೆ ಕಾರ್ಯಾಚರಣೆ ನಡೆಸಿ ವ್ಯಕ್ತಿಯ ಮೃತ ದೇಹ ಪತ್ತೆ ಹಚ್ಚಿ ಹೊರ ತೆಗೆದಿದ್ದಾರೆ.