ಮಳವಳ್ಳಿ: ಕೆರೆ ಟೆಂಡರ್ ನಲ್ಲಿ ಅವ್ಯವಹಾರ ನಡೆದಿಲ್ಲಿ , ಕಿರುಗಾವಲುನಲ್ಲಿ ಸುದ್ದಿಗೋಷ್ಠಿ ನಡೆಸಿ ಗ್ರಾ ಪಂ ಉಪಾಧ್ಯಕ್ಷರ ಸ್ಪಷ್ಟನೆ
ಮಳವಳ್ಳಿ : ತಾಲ್ಲೂಕಿನ ಕಿರುಗಾವಲು ಚಿಕ್ಕ ಕೆರೆಯನ್ನು ಮೀನುಗಾರಿಕೆಗೆ ಟೆಂಡರ್ ನೀಡು ವಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಪಿಡಿಒ ಅವರುಗಳು ಅವ್ಯ ವಹಾರ ನಡೆಸಿದ್ದಾರೆ ಎಂಬ ಜೆಡಿಎಸ್ ಮುಖಂಡರ ಆರೋಪ ವನ್ನು ತಳ್ಳಿಹಾಕಿರುವ ಕಿರುಗಾವಲು ಗ್ರಾ ಪಂ ಉಪಾಧ್ಯಕ್ಷ ಮಾದೇಗೌಡ ಅವರು ಕೆರೆ ಹರಾಜು ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಿಯಮಾವಳಿಯಂತೆ ನಡೆದಿದ್ದು ಯಾವುದೇ ಅವ್ಯವಹಾರ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕಿರುಗಾವಲು ಗ್ರಾಮದ ಕೆರೆ ಅಂಗಳದಲ್ಲಿ ಗುರುವಾರ ಸಾಯಂಕಾಲ 4.30 ರ ಸಮಯ ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತ ನಾಡಿದ ಅವರು ಯಾವುದೇ ಬಹಿರಂಗ ಪ್ರಚಾರ ನಡೆಸದೆ ಕೆಲವೇ ಜನರ ಸಮ್ಮುಖದಲ್ಲಿ ಟೆಂಡರ್ ನಡೆಸಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದರು.