ಭಗವಂತನ ನಿತ್ಯ ಸ್ಮರಣೆಯಿಂದ ನಾವು ಪುಣ್ಯಗಳಿಸಲು ಸಾಧ್ಯ ಎಂದು ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹೇಳಿದರು. ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಗುರುವಾರ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಪ್ರಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಮೇಲೆ ಭಗವಂತನ ಕೃಪೆ ಸಾಕಷ್ಟಿದೆ. ಆತನ ದಯೆಯಿಂದ ನಾವು ಜೀವನ ನಡೆಸುತ್ತಿದ್ದೇವೆ. ನಮ್ಮ ಜೀವನದಲ್ಲಿ ಸತ್ಕಾರ್ಯಗಳನ್ನು ಮಾತ್ರ ಮಾಡಿ ಭಗವಂತನ ಪ್ರೀತಿ ಸಂಪಾದಿಸ