ಜೋಗತಿ ಮಂಜಮ್ಮ ನೇತೃತ್ವದ ಮಂಗಳಮುಖಿಯರ ತಂಡ ಕುಮಾರ ಕೃಪಾ ರಸ್ತೆಯಲ್ಲಿ ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಿದ್ದು, ಪೊಲೀಸರು ಎಲ್ಲರನ್ನ ವಶಕ್ಕೆ ಪಡೆಯಲಾಯಿತು ಈ ವೇಳೆ ಮಾತನಾಡಿದ ಜೋಗತಿ ಮಂಜಮ್ಮ ಅವರು, ನಮಗೆ ನ್ಯಾಯ ಬೇಕು, ನಮಗೆ ಥಿಯೇಟರ್ ಬೇಕು. ಅಶೋಕ್ ಜಯರಾಂ ಹೊಲ ಮಾರಿ ಶಿವಲೀಲಾ ಸಿನಿಮಾ ಮಾಡಿದ್ದಾರೆ. ಎಲ್ಲವನ್ನೂ ಕಳೆದುಕೊಂಡು ನಾಲ್ಕು ವರ್ಷದಿಂದ ಸಿನಿಮಾ ಮಾಡಿದ್ದಾರೆ. ಈ ಸಿನಿಮಾಗೆ ಬೆಲೆ ಇಲ್ಲವೇ? ಥಿಯೇಟರ್ ಕೇಳಿದ್ರೆ ನಿಮ್ಮ ಸಿನಿಮಾ ಯಾರು ನೋಡ್ತಾರೆ ಅಂತಾರೆ. ನಾವು ಮನುಷ್ಯರಲ್ವಾ? ನಮಗೆ ಮನಸ್ಸು ಇಲ್ಲವಾ? ಇಷ್ಟು ಜನ ತೃತೀಯ ಲಿಂಗಿಗಳ ಕಟ್ಟಿಕೊಂಡು ಸಿನಿಮಾ ಮಾಡಿದ್ದೇವೆ. ಹಗಲು ರಾತ್ರಿ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಇದಕ್ಕೆ ಥಿಯೇಟರ್ ಇಲ್ಲ ಅಂತಾರೆ.