ರಾಮನಗರ: ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ವೇದಿಕೆ ನಿರ್ಮಾಣ, ಹೆದ್ದಾರಿಯಲ್ಲೆ ಬಸ್ಸುಗಳ ನಿಲುಗಡೆ
ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಸಚವರ ಕಾರ್ಯಕ್ರಮದ ವೇದಿಕೆ ನಿರ್ಮಾಣ ಮಾಡಿದ ಪರಿಣಾಮ ಮೈಸೂರು ಕಡೆಯಿಂದ ಬಂದ ಬಸ್ಸುಗಳು ನಿಲ್ದಾಣದ ಒಳಗೆ ಬಾರದೆ ಹೆದ್ದಾರಿಯಲ್ಲೆ ನಿಲುಗಡೆ ಮಾಡಿದ್ದವು. ಪ್ರಯಾಣಿಕರು ಬಿಸಿಲಿನಲ್ಲೆ ನಿಂತ್ತು ಬಸ್ಸುಗಳನ್ನ ಹತ್ತುತ್ರಿದ್ದರು. ಸಾರಿಗೆ ಬಸ್ಸುಗಳು ಹೆದ್ದಾರಿಯಲ್ಲಿ ನಿಂತ್ತ ಪರಿಣಾಮ ಹೆದ್ದಾರಿಯಲ್ಲಿ ಇತರೆ ವಾಹನಗಳ ಸಂಚಾರಕ್ಕೆ ತೊಡಕಾಗಿತ್ತು. ಸೋಮವಾರ ಸಾರಿಗೆ ಇಲಾಖೆ ಸಚಿವರ ಪ್ರವಾಸ ಇದ್ದ ಕಾರಣ ಬದ್ ನಿಲ್ದಾಣದಲ್ಲೆ ವೇದಿಕೆ ನಿರ್ಮಾಣ ಮಾಡಲಾಗಿತ್ತು.