ಶಿರಸಿ: ಕಾಗೇರಿಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಂದ ಗೋಪೂಜೆ
ಶಿರಸಿ : ಕೆನರಾ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಉತ್ತಮ ಸ್ವಗ್ರಾಮವಾದ ಶಿರಸಿ ತಾಲೂಕಿನ ಕಾಗೇರಿಯಲ್ಲಿರುವ ತಮ್ಮ ಮನೆಯಲ್ಲಿ ಬುಧವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಗೋ ಪೂಜೆಯನ್ನು ನೆರವೇರಿಸಿದರು. ಈ ವೇಳೆ ಸಂಸದರ ತಾಯಿ, ಪತ್ನಿ, ಸಹೋದರರು ಮತ್ತು ಮಕ್ಕಳು ಹಬ್ಬದ ಪೂಜೆಯಲ್ಲಿ ಭಾಗವಹಿಸಿದರು.