ಹೊಸನಗರ: ಜಾತಿ ಗಣತಿ ಸಮೀಕ್ಷೆ ಕರ್ತವ್ಯಕ್ಕೆ ಗೈರು: ಹೊಸನಗರದ ಶಿಕ್ಷಣ ಇಲಾಖೆ ಅಧಿಕಾರಿ ಎನ್ ರಂಗನಾಥ್ ಅಮಾನತ್ತು
ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮೀಕ್ಷೆ ನಡೆಯುತ್ತಿದ್ದು ಈ ನಡುವೆ ಸಮೀಕ್ಷೆ ಕರ್ತವ್ಯಕ್ಕೆ ಗೈರಾಗಿದ್ದ ಅಧಿಕಾರಿಯನ್ನ ಅಮಾನತು ಮಾಡಲಾಗಿದೆ.ಹೊಸನಗರ ತಾಲ್ಲೂಕು ಶಿಕ್ಷಣ ಇಲಾಖೆ ಅಧಿಕಾರಿ ಎಂ.ರಂಗನಾಥ್ ಎಂಬುವವರನ್ನ ಅಮಾನತು ಮಾಡಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ ಎಂಬ ಮಾಹಿತಿ ಶುಕ್ರವಾರ ಲಭ್ಯವಾಗಿದೆ.ಸಮೀಕ್ಷೆ ನಡೆಯುತ್ತಿದ್ದರೂ ರಂಗನಾಥ್ ಕೆಲಸಕ್ಕೆ ರಜೆ ಹಾಕಿದ್ದರು. ಸಮೀಕ್ಷೆ ಮಾಡುವ ಒಂದಿಷ್ಟು ಜವಾಬ್ದಾರಿ ಹೊಂದಿದ್ದರು. ರಂಗನಾಥ್ ಬಿಆರ್ ಎಸ್ ಕೇಂದ್ರದ ಸಮನ್ವಯಾಧಿಕಾರಿಯಾಗಿದ್ದರು. ರಂಗನಾಥ್ ರಜೆ ಹಾಕಿ ಅಧಿಕಾರಿಗಳ ದೂರವಾಣಿ ಕರೆ ಸ್ವೀಕರಿಸದ ಹಿನ್ನೆಲೆ ಅಮಾನತ್ತು ಮಾಡಲಾಗಿದೆ.