ದಾಂಡೇಲಿ : ಸವಾರನ ನಿಯಂತ್ರಣ ತಪ್ಪಿ ದ್ಬಿಚಕ್ರ ವಾಹನವೊಂದು ಡ್ರೈನೇಜ್ ಹೊಂಡಕ್ಕೆ ಬಿದ್ದ ಘಟನೆ ನಗರದ ಜೆ.ಎನ್.ರಸ್ತೆಯಲ್ಲಿ ಸೋಮವಾರ ರಾತ್ರಿ 8:30 ಗಂಟೆ ಸುಮಾರಿಗೆ ನಡೆದಿದೆ. ವೇಗವಾಗಿ ಬಂದ ಕೆಎ:65, ಇ 7487 ಸಂಖ್ಯೆಯ ದ್ವಿಚಕ್ರ ವಾಹನವೊಂದು ಸವಾರನ ನಿಯಂತ್ರಣ ತಪ್ಪಿ ಜೆ.ಎನ್.ರಸ್ತೆಯಲ್ಲಿ ದುರಸ್ತಿ ಕಾರ್ಯಕ್ಕೆ ತೆರೆದಿಟ್ಟಿದ್ದ ಬೃಹತ್ ಗಾತ್ರದ ಡ್ರೈನೇಜ್ ಹೊಂಡಕ್ಕೆ ಬಿದ್ದಿದೆ. ಬಿದ್ದ ರಭಸಕ್ಕೆ ಸವಾರರನಿಗೆ ಗಾಯವಾಗಿದೆ. ಮಳೆ ನೀರು , ಇನ್ನಿತರ ತ್ಯಾಜ್ಯ ನೀರು ಸರಾಗವಾಗಿ ಹರಿಯಲೆಂದು ಇದ್ದಿರುವ ಡ್ರೈನೇಜನ್ನು ನವೀಕರಣ ಇಲ್ಲವೇ ದುರಸ್ತಿ ಮಾಡುವ ತೆರೆದಿಟ್ಟು ಅದರ ಸುತ್ತಲೂ ಅನಾಹುತ ನಡೆಯದಿರಲೆಂದು ಕಲ್ಲುಗಳನ್ನು, ಸಿಮೆಂಟ್ ಹಲಗೆಗಳನ್ನು ಇಡಲಾಗಿತ್ತು. ಇಂದು ಸವಾರನ ನಿಯಂತ್ರಣ ತಪ್ಪಿ ದ್ವಿಚಕ ವಾಹನ ಬಿದ್ದಿದೆ