ರಾಯಚೂರು ಜಿಲ್ಲಾ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ನ್ಯಾಯಾಲಯಗಳಲ್ಲಿ ಡಿಸೆಂಬರ್ 13ರಂದು ಬೆಳಗ್ಗೆ 10 ಗಂಟೆಗೆ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ ಎಂದು ಹಿರಿಯ ಶ್ರೇಣಿಯ ದಾವಾಣಿ ನ್ಯಾಯಾಧೀಶರಾದ ಹೆಚ್ ಎ ಸಾತ್ವಿಕ್ ಅವರು ಭಾನುವಾರ 5 ಗಂಟೆಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಲೋಕ ಅದಾಲತ್ನ ನ್ಯಾಯಾಲಯದಲ್ಲಿ ಬಾಕಿ ಇರುವ ಸಿವಿಲ್ ಮತ್ತು ಕ್ರೀಮಿನಲ ಮೊಕದಮ್ಮೆಗಳ ಜೊತೆಗೆ ಮೋಟಾರ ವಾಹನ ಪ್ರಕರಣಗಳು ಮತ್ತು ಎಲ್ಲಾ ಬಗೆಯ ಪ್ರಕರಣಗಳನ್ನು ಲೋಕ ಅದಾಲತ್ ಮುಖಾಂತರ ಇತ್ಯರ್ಥಗೊಳಿಸಲಾಗುವುದು ಎಂದಿಂದ್ದಾರೆ.