ಬಸವತಾಲಿಬಾನಿಗಳು ಎಂದ ಕನ್ಹೇರಿ ಶ್ರೀಗಳ ವಿರುದ್ಧ ಇಳಕಲ್ ನಲ್ಲಿ ಕಾಶಪ್ಪನವರ ವಾಗ್ದಾಳಿ. ಇವರದ್ದು ಯಾವ ತತ್ವ,ನಾವು ತತ್ವದ ಮೇಲೆ ನಡೆಯುವಂತವರು. ಬಸವ ತತ್ವದ ಮೇಲೆ ನಾನು ನಡೆಯುತ್ತೇನೆ. ಬಸವ ತತ್ವ ಏನು ಹೇಳುತ್ತದೆ ಅದನ್ನ ಫಾಲೋ ಮಾಡಬೇಕಲ್ವಾ! 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಏನು ಹೇಳಿದ್ದಾರೆ. ಅದು ಸತ್ಯವೇ ಇದೆ ,ಅದನ್ನು ಒಪ್ಪಿಕೊಳ್ಳೋಕೆ ರೆಡಿ ಇಲ್ಲ ಇವರು. ಅಂದರೆ ಮೂಢನಂಬಿಕೆ ಶಾಶ್ವತವಾಗಿ ಈ ದೇಶದಲ್ಲಿ ಇರಬೇಕು. ಗುಲಾಮಗಿರಿ ಮಾಡ್ರಿ ಅಂತಾರೆ ಇವರು. ಗುಲಾಮಗಿರಿ ಬೇಡ ಎಲ್ಲರನ್ನೂ ಸಮಾನ ರೀತಿಯಾಗಿ ಕಾಣಿರಿ ಮಾನವೀಯತೆಯಿಂದ ಕಾಣಿರಿ ಎಂದವರು ಬಸವಣ್ಣನವರು. ಗುಲಾಮಗಿರಿ ಮಾಡಿ, ಸೇವೆ ಮಾಡಿರಿ ಕಾಲಿಗೆ ಬೀಳರಿ. ಪಾದ ತೊಳೀರಿ ನೀರು ಕುಡಿಯಿರಿ ಅಂತಾರೆ ಇವರು.