ಭದ್ರಾವತಿ: ಗುಡ್ಡದಕೆಂಚಮ್ಮನಹಳ್ಳಿ ಯಲ್ಲಿ ಬಾವಿಗೆ ಬಿದ್ದಿದ್ದ ಕಾಡುಹಂದಿ ರಕ್ಷಿಸಿದ ಯುವಕ
ಕಾಡಿನಿಂದ ಬಂದು ಬಾವಿಗೆ ಬಿದ್ದಿದ್ದ ಕಾಡು ಹಂದಿಯನ್ನ ಇವತ್ತು ನೋಡುವ ರಕ್ಷಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಗುಡ್ಡದ ಕೆಂಚಮ್ಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ವಾಸುಕುಮಾರ ಎಂಬುವರ ಮನೆಯ ಮುಂಭಾಗದ ಬಾವಿಯಲ್ಲಿ ಬಿದ್ದಿದ್ದ ಕಾಡು ಹಂದಿಯನ್ನು ಚಂದ್ರ ಎಂಬ ಯುವಕ ಬಾವಿಯಿಂದ ಮೇಲೆತ್ತಿ ರಕ್ಷಣೆ ಮಾಡಿದ್ದಾನೆ. ಅಲ್ಲದೇ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾನೆ. ಆತನ ಕೆಲಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.