ಬೀದರ್: ಪರಿಸರ ಉಳಿಸದಿದ್ದರೆ ಸೃಷ್ಟಿಯ ವಿನಾಶ ನಿಶ್ಚಿತ: ತಾಲೂಕಿನ ಮರಕುಂದಾದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಅಮೃತ್ ಚಿಮ್ಕೋಡ್
Bidar, Bidar | Sep 16, 2025 ಪರಿಸರ ಉಳಿಸದಿದ್ದರೆ ಸೃಷ್ಟಿಯ ವಿನಾಶ ನಿಶ್ಚಿತ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಅಮೃತ್ ಚಿಮ್ಕೋಡ್ ಅವರು ಅಭಿಪ್ರಾಯಪಟ್ಟರು. ಮರುಕುಂದಾ ಚಾಲುಕ್ಯ ಶಿಕ್ಷಣ ಸಂಸ್ಥೆ ಪರಿಸರದಲ್ಲಿ ಜಿಲ್ಲಾ ಪರಿಸರ ವಾಹಿನಿ ವತಿಯಿಂದ ಮಂಗಳವಾರ ಮಧ್ಯಾ ಮೂರಕ್ಕೆ ಏರ್ಪಡಿಸಿದ್ದ ಓಜೋನ್ ದಿನಾಚರಣೆ ಹಾಗೂ ಪರಿಸರ ಸಂರಕ್ಷಣೆಗೆ ಶ್ರಮಿಸಿದ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು. ಜಿಲ್ಲಾ ಪರಿಸರ ವಾಹಿನಿ ಅಧ್ಯಕ್ಷ ಶೈಲಿಂದ್ರ ಕೌಡಿ ಮಾತನಾಡಿದರು.