ಗದಗ: ನಗರದಲ್ಲಿ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕನ ಮನೆ ಮೇಲೆ ರೇಡ್
Gadag, Gadag | May 31, 2025 ನಗರದಲ್ಲಿ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ ಮನೆ ಮೇಲೆ ರೇಡ್ ಆಗಿದೆ. ಭ್ರಷ್ಟ ಅಧಿಕಾರಿಗೆ ಬೆಳ್ಳಂಬೆಳಿಗ್ಗೆ ಶಾಕ್ ನೀಡಲಾಗಿದೆ. ಆದಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಮೇಲೆ ದಾಳಿ ಮಾಡಲಾಗಿದ್ದು, ನಗರದ ಹುಡ್ಕೋ ಹಾಲೋನಿ ಸೇರಿದಂತೆ ಭಾವ, ಅಳಿಯನ ಮನೆ ಸೇರಿ ಒಟ್ಟು ಆರು ಕಡೆ ದಾಳಿ ಮಾಡಲಾಗಿದೆ.