ಯಳಂದೂರು: ಮದ್ದೂರು ಬೈಪಾಸ್ ರಸ್ತೆಯಲ್ಲಿ ಕಾರಿಗೆ ಗುದ್ದಿದ ಹಸುಗಳು –ಚಾಲಕ ಪಾರು
ಯಳಂದೂರು ತಾಲ್ಲೂಕಿನ ಮದ್ದೂರು ಗ್ರಾಮದ ಸಮೀಪದ ಬೈಪಾಸ್ ರಸ್ತೆಯಲ್ಲಿ ಭಾನುವಾರ ರಾತ್ರಿ 8ರಲ್ಲಿ ಚಲಿಸುತ್ತಿದ್ದ ಕಾರಿಗೆ ಹಸುವೊಂದು ಗುದ್ದಿದ ಘಟನೆ ನಡೆದಿದೆ. ಚಾಮರಾಜನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಶ್ರೇಯಸ್ ಗೌಡ ಅವರಿಗೆ ಸೇರಿದ ಕಾರು, ಮದ್ದೂರು ಬೈಪಾಸ್ ರಸ್ತೆಯಲ್ಲಿ ಸಾಗುತ್ತಿರುವಾಗ ಅಚಾನಕ್ ಆಗಿ ಹಸುಗಳು ಅಡ್ಡ ದಿಡ್ಡಿಯಾಗಿ ಓಡುತ್ತಾ ಬಂದಿದ್ದು, ಅವರ ಕಾರಿಗೆ ಗುದ್ದಿವೆ. ಗುದ್ದಿಸಿದ ಪರಿಣಾಮವಾಗಿ ಕಾರಿನ ಮುಂಭಾಗದ ಗಾಜು ಒಡೆದು ಹಾನಿಯಾಗಿದೆ. ಅಪಘಾತದ ವೇಳೆ ಕಾರುಚಾಲಕ ತಕ್ಷಣ ತಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಸ್ಥಳೀಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.