ದಾಂಡೇಲಿ: ಕುಳಗಿಯಿಂದ ಯುವಕ ನಾಪತ್ತೆ, ಅಂಬಿಕಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ದಾಂಡೇಲಿ : ಮನೆಯಿಂದ ಕೆಲಸಕ್ಕೆಂದು ಹೋದವನು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ತಾಲೂಕಿನ ಅಂಬಿಕಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಬಗ್ಗೆ ನಾಪತ್ತೆಯಾದ ಯುವಕನ ತಾಯಿ ಸೋಮವಾರ ರಾತ್ರಿ 9:00 ಗಂಟೆ ಸುಮಾರಿಗೆ ದಾಂಡೇಲಿ ನಗರದಲ್ಲಿ ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದ್ದಾರೆ. ತಾಲೂಕಿನ ಕುಳಗಿ ಗ್ರಾಮದ ನಿವಾಸಿಯಾಗಿರುವ 19 ವರ್ಷ ವಯಸ್ಸಿನ ಫರಾನ್ ಇಮ್ತಿಯಾಜ್ ಹೆಬ್ಬಳ್ಳಿ ಎಂಬಾತನೇ ನಾಪತ್ತೆಯಾದ ಯುವಕನಾಗಿದ್ದಾನೆ. ಈತ ರೆಸಾರ್ಟ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈತ ನ.07 ರಂದು ಬೆಳಿಗ್ಗೆ 11 ಗಂಟೆಗೆ ಮನೆಯಿಂದ ಹೋದವನು ಮರಳಿ ಮನೆಗೆ ಬಾರದೆ ಸಂಬಂಧಿಕರ ಮನೆಗೂ ಹೋಗದೆ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ.