ಹರಿಹರ: ಹರಿಹರದಲ್ಲಿ ಕೋಟ್ಯಂತರ ಮೌಲ್ಯದ ಸಾಮಗ್ರಿ ದುರುಪಯೋಗ, ಉಗ್ರಾಣ ಪಾಲಕ, ಇತರರ ಮೇಲೆ ಎಫ್.ಐ.ಆರ್
ದಾವಣಗೆರೆ ಜಿಲ್ಲೆಯ ಹರಿಹರ ನಗರದ ಬೆಸ್ಕಾಂ ಉಗ್ರಾಣದಲ್ಲಿ ಕೋಟ್ಯಂತರ ರೂ. ಮೌಲ್ಯದ ಸಾಮಗ್ರಿಗಳ ದುರುಪಯೋಗ ಮಾಡಿರುವ ಆರೋಪದ ಮೇಲೆ ಸಹಾಯಕ ಉಗ್ರಾಣ ಪಾಲಕ ಅರುಣಕುಮಾರ್ ಜಿ.ಎನ್ ಹಾಗೂ ಮತ್ತಿತರರ ವಿರುದ್ಧ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸಂಜೆ 7 ಗಂಟೆಗೆ ಎಫ್ಐಆರ್ ದಾಖಲಾಗಿದೆ. 2018ರ ಜೂನ್ 19ರಿಂದ 2025ರ ಸೆಪ್ಟೆಂಬರ್ 16ರವರೆಗೆ ಹರಿಹರ ಬೆಸ್ಕಾಂ ಉಗ್ರಾಣದಲ್ಲಿ ಸಹಾಯಕ ಉಗ್ರಾಣ ಪಾಲಕರಾಗಿ ಸೇವೆ ನಿರ್ವಹಿಸುತ್ತಿದ್ದ ಆರೋಪಿ ಅರುಣಕುಮಾರ್, ಲೆಡ್ಜರ್ ದಾಖಲೆಗಳಲ್ಲಿ ಸಾಮಗ್ರಿಗಳು ನೈಜವಾಗಿ ಉಗ್ರಾಣದಲ್ಲಿರುವಂತೆ ನಮೂದಿಸಿ, ಅವುಗಳನ್ನು ಹೊರಕ್ಕೆ ತೆಗೆದು ದುರುಪಯೋಗ ಮಾಡಿಕೊಂಡಿರುವ, ವಿಶೇಷವಾಗಿ, ಗ್ಯಾರಂಟಿ ಅವಧಿಯಲ್ಲಿದ್ದ ಪರಿವರ್ತಕಗಳನ್ನು ದುರಸ್ತಿ ಕೇಂದ್ರಗಳಿಗೆ ಕಳುಹಿಸಿಲ್ಲ.