ಬೀಳಗಿ: ಕುಸಿದ ಈರುಳ್ಳಿ ಬೆಲೆ ,ಮನ್ನಿಕೇರಿ ಗ್ರಾಮದಲ್ಲಿ ಈರುಳ್ಳಿ ಮಣ್ಣಲ್ಲಿ ಮುಚ್ಚಿ ಕಣ್ಣೀರಾದ ರೈತ
ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ಈರುಳ್ಳಿ ಬೆಳೆದ ರೈತರು,ಬೆಲೆ ಕುಸಿದ ಪರಿಣಾಮವಾಗಿ ಕಣ್ಣೀರು ಸುರಿಸುವಂತಾಗಿದೆ. ಅತೀವೃಷ್ಠಿಯಿಂದ ಮೊದಲೇ ಬೆಳೆ ಹಾನಿ ಅನುಭವಿಸಿರುವ ರೈತರು ಈರುಳ್ಳಿ ಬೆಲೆ ಕುಸಿದಿದ್ದರಿಂದ ಬೆಳೆದ ಈರುಳ್ಳಿಯನ್ನ ವಾಪಸ್ಸು ಮಣ್ಣಲ್ಲೇ ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಲಿಂಗಾಪುರ ಎಸ್.ಆರ್ ಗ್ರಾಮದ ರೈತ ಪುಂಡಲೀಕ ತೊಂಡಿಕಟ್ಟಿ ಅವರು ಮನ್ನಿಕೇರಿ ಗ್ರಾಮದಲ್ಲಿ ತಮ್ಮ ಮೂರು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು.ಈಗ ಬೆಲೆ ಕುಸಿದಿದ್ದರಿಂದ ಕಟಾವು ಮಾಡಿ ಮಾರಾಟ ಮಾಡಲು ಖರ್ಚು ವೆಚ್ಚಗಳು ಸರಿ ದೂಗುವುದಿಲ್ಲವೆಂದು ಮಣ್ಣಲ್ಲೇ ಈರುಳ್ಳಿ ಮುಚ್ಚುತ್ತಿದ್ದಾರೆ.ಕಟಾವು ಮಾಡಿದರೂ ಕೂಲಿ ಕಾರ್ಮಿಕರ ಕೂಲಿ ದುಡ್ಡು ಕೂಡ ಕೊಡಲು ಸಾಧ್ಯವಾಗುವುದಿಲ್ಲ.