ಜನವರಿ 5 ಕ್ಕೆ ದೊಡ್ಡಬಳ್ಳಾಪುರ ಬಂದ್. ನೇಯ್ಗೆ ಉದ್ಯಮದ ಬಿಕ್ಕಟ್ಟನ್ನು ಬಗೆಹರಿಸುವಂತೆ ಆಗ್ರಹ. ನೇಕಾರ ಸಂಘಟನೆಗಳಿಂದ ದೊಡ್ಡಬಳ್ಳಾಪುರ ಬಂದ್ಗೆ ಕರೆ. ದೊಡ್ಡಬಳ್ಳಾಪುರ. ಸೂರತ್ ಸೀರೆಗಳಿಂದ ದೊಡ್ಡಬಳ್ಳಾಪುರ ನೇಯ್ಗೆ ಉದ್ಯಮದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸುವಂತೆ ಆಗ್ರಹಿಸಿ ನೇಕಾರ ಸಂಘಟನೆಗಳಿಂದ ಜನವರಿ ೫ ರಂದು ದೊಡ್ಡಬಳ್ಳಾಪುರ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ನೇಕಾರರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಪಿ.ಎ ವೆಂಕಟೇಶ್ ತಿಳಿಸಿದರು.