ಬೆಂಗಳೂರು ಉತ್ತರ: ಸಂಸದ ತೆಜಸ್ವೀ ಸೂರ್ಯ ಉದ್ಘಾಟಿಸಿದ ವಿಜಯನಗರದ ದೀಪಾಂಜಲಿ ನಗರ ಲೇಕ್ ಪಾರ್ಕ್ನ ಜಿಮ್ ಉಪಕರಣ ಕೇಂದ್ರ
ಬೆಂಗಳೂರು ದಕ್ಷಿಣ ಸಂಸದರ ನಿಧಿ ಅಡಿಯಲ್ಲಿ, ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೀಪಾಂಜಲಿ ನಗರದ ಲೇಕ್ ಪಾರ್ಕ್ನಲ್ಲಿ ನೂತನವಾಗಿ ಅಳವಡಿಸಲಾದ ಜಿಮ್ ಉಪಕರಣಗಳ ಸುಸಜ್ಜಿತ ವ್ಯಾಯಾಮ ಕೇಂದ್ರವನ್ನು ಇಂದು ಸಂಸದ ಶ್ರೀ ತೆಜಸ್ವೀ ಸೂರ್ಯ ಅವರು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದರು.ಸಂಸದರ ನಿಧಿ ಅಡಿಯಲ್ಲಿ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಆರೋಗ್ಯ, ಶಿಕ್ಷಣ ಮತ್ತು ಹಿರಿಯ ನಾಗರಿಕರ ಅನುಕೂಲಕ್ಕಾಗಿ ಅನೇಕ ಜನೋಪಯೋಗಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ನಿಧಿಯನ್ನು ಸಮರ್ಪಕವಾಗಿ ಬಳಸಿ ಮಾದರಿ ಕ್ಷೇತ್ರ ನಿರ್ಮಾಣದತ್ತ ಶ್ರಮಿಸಲಾಗುತ್ತಿದೆ.