ಇಳಕಲ್: ಯುನಿಯನ್ ಸಂಸ್ಥೆಯ ಕಾರ್ಯ ಶ್ಲಾಘನೀಯ: ನಗರದಲ್ಲಿ ಶಾಸಕ ಕಾಶಪ್ಪನವರ
Ilkal, Bagalkot | Sep 28, 2025 ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ, ಸತ್ಕಾರ ಮಾಡಿರುವ ಯುನಿಯನ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ಇಳಕಲ್ಲದ ಸುವರ್ಣ ರಂಗಮಂದಿರದಲ್ಲಿ ಯುನಿಯನ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಸ್ಥೆ ಸೆ.28 ಸಾಯಂಕಾಲ 6 ಗಂಟೆಗೆ ಹಮ್ಮಿಕೊಂಡಿದ್ದ ೭೫ ವಸಂತಗಳನ್ನು ಪೂರೈಸಿದ ಮಾತೃಸ್ವರೂಪಿಯಣಿರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧÀಕರಿಗೆ ಸತ್ಕಾರ ಸಮಾರಂಭವನ್ನು ಜ್ಯೋತಿ ಬೆಳೆಗಿಸುವ ಮೂಲಕ ಉದ್ಘಾಟಿಸಿದರು ರಂಗಭೂಮಿ, ಕಿರುತೆರೆ ಚಲನಚಿತ್ರ ಕಲಾವಿದೆ ಪಂಕಜ ಮಾತನಾಡಿ ಮಹಿಳೆಯರ ಬಗ್ಗೆ ಅಪಾರವಾದ ಕಾಳಜಿ ಹೊಂದ