ಕೃಷ್ಣರಾಜಪೇಟೆ: ಬೆಳೆತ್ತೂರು ಗ್ರಾಮದಲ್ಲಿ ಸಾಲಭಾಧೆ, ರೈತ ಆತ್ಮಹತ್ಯೆ
ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲ್ಲೂಕಿನ ಬೆಳತ್ತೂರು ಗ್ರಾಮದಲ್ಲಿ, 47 ವರ್ಷದ ಕೃಷ್ಣಗೌಡ ಎಂಬ ರೈತ ಸಾಲಬಾಧೆಯಿಂದಾಗಿ ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2 ಎಕರೆ ಜಮೀನು ಹೊಂದಿದ್ದ ಕೃಷ್ಣಗೌಡ ಅವರು ಕೃಷಿಗಾಗಿ ವಿವಿಧ ಬ್ಯಾಂಕುಗಳು ಮತ್ತು ಸಂಘ ಸಂಸ್ಥೆಗಳಿಂದ 4 ಲಕ್ಷಕ್ಕೂ ಹೆಚ್ಚು ಸಾಲ ಪಡೆದಿದ್ದರು. ಸಾಲದ ಹೊರೆ ತೀರದ ನೋವಾಗಿ, ಮನೆಯಲ್ಲೇ ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಈ ಸಂಬಂಧ ಕೆ. ಆರ್. ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂಜೆ 5:00 ಗಂಟೆಯಲ್ಲೇ ಪ್ರಕರಣ ದಾಖಲಾಗಿದೆ