ಹಾಸನ: ಕುಡಿದ ಅಮಲಿನಲ್ಲಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಲು ಯತ್ನಿಸಿದ ಗೂಡ್ಸ್ ವಾಹನ ಚಾಲಕ: ಕೆ ಆರ್ ಪುರಂನಲ್ಲಿ ಘಟನೆ
Hassan, Hassan | Sep 16, 2025 ಹಾಸನ : ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಎಸ್ಕೆಪ್ ಆಗಲು ಯತ್ನಿಸಿದ ಘಟನೆ ಹಾಸನ ನಗರದ ಕೆ.ಆರ್. ಪುರಂನಲ್ಲಿ ನಡೆದಿದೆ. ಬೈಕ್ ಸವಾರರು ಜಸ್ಟ್ ಮಿಸ್ ಆಗಿದ್ದಾರೆ. ವಾಹನ ಗುದ್ದಿ ಸವಾರರು ಕೆಳಗೆ ಬಿದ್ದರೂ ವಾಹನ ನಿಲ್ಲಿಸದೆ ಎಸ್ಕೆಪ್ ಆಗಲು ಯತ್ನಿಸಿದ್ದು ಸ್ಥಳದಲ್ಲಿದ್ದ ಯುವಕರು ಹತ್ತು ಕಿಲೋ ಮೀಟರ್ ಚೇಸ್ ಮಾಡಿ ಚಾಲಕನಿಗೆ ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ಚಾಲಕನ ದುರ್ವತ್ರನೆ ಜನರ ಪ್ರಾಣಕ್ಕೆ ಕುತ್ತು ತಂದಿದ್ದು ಪ್ರಾಣ ಹಾನಿಯಿಂದ ಜನರು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾರೆ. ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಚಾಲಕನ ನಿರ್ಲಕ್ಷ್ಯ ಚಾಲನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.