ಹಿರಿಯೂರು: ತಾಳಿಕಟ್ಟಿದ ಗಂಡನಿಗೆ ಚಟ್ಟ ಕಟ್ಟಿದ ಪತ್ನಿ: ಅಬ್ಬಿನಹೊಳೆ ಪೊಲೀಸರಿಂದ ಇಬ್ಬರು ಅರೆಸ್ಟ್
ಅನೈತಿಕ ಸಂಬಂಧ ಹಿನ್ನೆಲೆ ತಾಳಿ ಕಟ್ಟಿದ ಗಂಡನಿಗೆ ಬಾಯ್ ಪ್ರೇಂಡ್ ಜೊತೆ ಸೇರಿ ಪತ್ನಿಯೇ ಚಟ್ಟ ಕಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಅಬ್ಬಿನಹೊಳೆ ಪೊಲೀಸರು ಬಂಧಿಸಿದ್ದಾರೆ ಎಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರೂ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳನ್ನ ಆಂದ್ರ ಪ್ರದೇಶದ ಸತ್ಯಸಾಯಿ ಜಿಲ್ಲೆಯ ಹಿರೆತಿರುಪೆ ಗ್ರಾಮದ ಮೂರ್ತಿ ಹಾಗೂ ಎ-೨ ಆರೋಪಿ ಮಮತ ಎಂದು ಗುರುತಿಸಲಾಗಿದೆ. ಆರೋಪಿ ಮಮತ ಖುದ್ದು ಆಕೆಯ ಗಂಡ ಬಾಲಣ್ಣನ ಹತ್ಯೆಗೆ ಸುಫಾರಿ ಕೊಟ್ಟು ಪ್ರೀಯಕರನ ಜೊತೆ ಸೇರಿ ಮರ್ಡರ್ ಮಾಡಿ ತೋಟದಲ್ಲಿ ಮಣ್ಣಿನಲ್ಲಿ ಹೂತಿಟ್ಟಿದ್ದರು. ಬಳಿಕ ಮಿಸ್ಸಿಂಗ್ ಕಂಪ್ಲೈಂಟ್ ಕೊಟ್ಟು ನಾಟಕವಾಡಿದ್ದಳು.