ಕುಮಟಾ: ನ.12 ರಂದು ತಾಲೂಕಿನ ವಿವಿದೆಡೆ ವಿದ್ಯುತ್ ವ್ಯತ್ಯಯ
ಕುಮಟಾ : ಕುಮಟಾ ಕೆ.ಪಿ.ಟಿ.ಸಿ.ಎಲ್ 110 ಕೆ.ವಿ ಉಪ ಕೇಂದ್ರದಲ್ಲಿ 110 ಕೆ.ವಿ ಬಸ್-ಬಾರ್ ನಿರ್ವಹಣಾ ಕಾಮಗಾರಿ ಇರುವುದರಿಂದ, ನ.12 ರಂದು ಕುಮಟಾ ತಾಲೂಕು ವ್ಯಾಪ್ತಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಹಾಗೂ ಮೂರುರ 11ಕೆ.ವಿ ಮಾರ್ಗದ ಕೇಬಲ್ ಬಿಚ್ಚಿ ಅಳವಡಿಸುವ ಕಾಮಗಾರಿ ಇರುವುದರಿಂದ ಕುಮಟಾ ನಗರ ಶಾಖೆಯ 11ಕೆ.ವಿ ಇಂಡಸ್ಟ್ರೀಯಲ್ 11ಕೆ.ವಿ ವಾಲ್ಗಳ್ಳಿ ಮಾರ್ಗದಲ್ಲಿ ಹಾಗೂ 11ಕೆ.ವಿ ಹೊಸ ಮಾರ್ಗದ ರಚನೆಯ ಕಾಮಗಾರಿ ಇರುವುದರಿಂದ 11ಕೆ.ವಿ ಮಿರ್ಜಾನ್ ಮಾರ್ಗ ಮತ್ತು 11 ಕೆ.ವಿ ಕತಗಾಲ ಮಾರ್ಗದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಕುಮಟಾ ಹೆಸ್ಕಾಂ, ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ವಿ) ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ