ಹಾವೇರಿ: ಜಾತಿಗಣತಿಯಲ್ಲಿ ಪಂಚಮಸಾಲಿ ಸಮಾಜದವರು ಏನು ನಮೂದು ಮಾಡಬೇಕೆಂಬ ಗೊಂದಲಕ್ಕೆ ಸೆ.17 ರಂದು ತೆರೆ; ನಗರದಲ್ಲಿ ಹರಿಹರದ ವಚನಾನಂದ ಶ್ರೀಗಳು
Haveri, Haveri | Sep 15, 2025 ರಾಜ್ಯ ಸರ್ಕಾರದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿಯ ಕಾಲಂನಲ್ಲಿ ಏನೆಂದು ನಮೂದಿಸಬೇಕೆಂಬ ಗೊಂದಲ ಪಂಚಮಸಾಲಿ ಸಮಾಜದಲ್ಲಿ ಮೂಡಿದೆ. ಇದರ ಪರಿಹಾರಕ್ಕಾಗಿ ಸೆ.17ರಂದು ಬೆಂಗಳೂರಿನ ಗೋಲ್ಡ್ ಫಿಂಚ್ ಹೋಟೆಲ್ನಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಂಡು ಘೋಷಿಸಲಾಗುವುದು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ಜಾತಿ ಪುನರ್ ಗಣತಿಯಾಗಿದ್ದು, ಇದಕ್ಕೆ ಸರ್ಕಾರವನ್ನು ಶ್ಲಾಘಿಸುತ್ತೇವೆ. ಇನ್ನು ಈ ಕುರಿತು ವಿವಿಧ ಮಠಾಧೀಶರು, ಸಮುದಾಯದ ಹಲವರು ತಂತಮ್ಮ ಹೇಳಿಕೆಗಳನ್ನು ನೀಡುತ್ತಿದ್ದು ಪಂಚಮಸಾಲಿ ಸಮಾಜ ಬಾಂಧವರು ಇಂಥವರ ಯಾರದೇ ಮಾತು ಕೇಳಬೇಕಾದ ಅವಶ್ಯಕತೆ ಇಲ್ಲ ಎಂದರು.