ಹಾಸನ: ಅಂಚೆ ಇಲಾಖೆಯಲ್ಲಿ ರಿಜಿಸ್ಟರ್ ಪೋಸ್ಟ್ ರದ್ದು: ನಗರದಲ್ಲಿ ಸಮಾಜ ಸೇವಕ ನಾಗೇಶ್ ಪಟೇಲ್ ಅಸಮಾಧಾನ
Hassan, Hassan | Oct 4, 2025 ಅಂಚೆ ಕಚೇರಿಗಳಲ್ಲಿ ರಿಜಿಸ್ಟರ್ ಪೋಸ್ಟ್ ರದ್ದುಗೊಳಿಸಿ ಸ್ಪೀಡ್ ಪೋಸ್ಟ್ ಗೆ ಮಾತ್ರ ಅವಕಾಶ ನೀಡಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಸಮಾಜಸೇವಕ ನಾಗೇಶ್ ಪಟೇಲ್ ಹೇಳಿದರು.ನಗರದಲ್ಲಿ ಇಂದು ಈ ಬಗ್ಗೆ ಮಾತನಾಡಿದ ಅವರು, ಅಂಚೆ ಇಲಾಖೆ ಅಡಿಯಲ್ಲಿ ಪ್ರಮುಖವಾಗಿ ರಿಜಿಸ್ಟರ್ ಪೋಸ್ಟ್ ಹಾಗೂ ಸ್ಪೀಡ್ ಪೋಸ್ಟ್ ಅತಿ ವೇಗವಾಗಿ ಜನರಿಗೆ ತಲುಪುತ್ತವೆ ಆದರೆ ಕೇಂದ್ರ ಸರ್ಕಾರ ಇದೀಗ ರಿಜಿಸ್ಟರ್ ಪೋಸ್ಟ್ ರದ್ದುಗೊಳಿಸಿರುವುದು ಬೇಸರದ ಸಂಗತಿ ಎಂದರು. ರಿಜಿಸ್ಟರ್ ಪೋಸ್ಟ್ ಮಾತ್ರ ಸೀಮಿತಗೊಳಿಸಿರುವ ಅಂಚೆ ಇಲಾಖೆ ಅದರ ಬೆಲೆಯನ್ನು ಹೆಚ್ಚಿಸಿದೆ ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತದೆ ಇದರ ಬಗ್ಗೆ ಗಮನಹರಿಸಲು ಕೇಂದ್ರ ಸರ್ಕಾರಕ್ಕೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಗುತ್ತಿದೆ ಎಂದರು