ಅಫಜಲ್ಪುರ: ಅಫಜಲಪುರ ಪಟ್ಟಣದ ವಿವಿಧ ಸರ್ಕಾರಿ ಹಾಸ್ಟೆಲ್ಗಳಿಗೆ ಲೋಕಾಯುಕ್ತರ ದಿಢೀರ್ ಭೇಟಿ: ಅವ್ಯವಸ್ಥೆ ಕಂಡು ಲೋಕಾ ಗರಂ
ಕಲಬುರಗಿ : ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ವಿವಿಧೆಡೆ ಸರ್ಕಾರಿ ಹಾಸ್ಟೆಲ್ಗಳಿಗೆ ಲೋಕಾಯುಕ್ತರ ದಿಢೀರ್ ಭೇಟಿ ನೀಡಿದ್ದಾರೆ.. ನವೆಂಬರ್ 11 ರಂದು ಮಧ್ಯಾನ 1 ಗಂಟೆಗೆ ಪಟ್ಟಣದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಸತಿ ನಿಲಯಗಳಿಗೆ ದಿಢೀರ್ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕೊಡುತ್ತಿರೋ ಆಹಾರವನ್ನ ಪರಿಶೀಲನೆ ನಡೆಸಿದರು.. ಇನ್ನೂ ಅಡುಗೆ ಮಾಡುವ ಕೋಣೆಯಲ್ಲಿ ಮತ್ತು ಪಾತ್ರೆಗಳನ್ನ ಸ್ವಚ್ಚತೆ ಕಾಪಾಡದೇ ಇರೋದನ್ನ ಕಂಡು ಹಾಸ್ಟೆಲ್ ಸಿಬ್ಬಂದಿಗಳಿಗೆ ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು.