ಬೆಂಗಳೂರು ಉತ್ತರ: ವಿದ್ಯಾರ್ಥಿನಿ ಕೊಲೆ! ಚಪ್ಪಲಿ ಎಸೆದ ಜನ! ಶ್ರೀ ರಾಮ್ ಪುರದಲ್ಲಿ 2 ಸಾವಿರದ 500 ಮಂದಿ ಜಮಾವಣೆ! ಪೊಲೀಸರ ಸರ್ಕಸ್! ಆರೋಪಿಗೆ ಜನ ಮಾಡಿದ್ದೇನು?
ಅಕ್ಟೋಬರ್ 18 ಸಂಜೆ 5.30ಕ್ಕೆ ಶ್ರೀ ರಾಮ್ ಪುರದಲ್ಲಿ ಬರೋಬ್ಬರಿ 2500 ಮಂದಿ ಜಮಾಯಿಸಿದ್ದರು. ವಿದ್ಯಾರ್ಥಿನಿ ಯಾಮಿನಿ ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣ ಸಂಬಂಧ ವಿಘ್ನೇಶ್ ನನ್ನ ಕೊಲೆ ನಡೆದ ಜಾಗಕ್ಕೆ ಸ್ಥಳ ಮಹಾಜರ್ ಮಾಡಲಾಗುತ್ತೆ. ಈ ವೇಳೆ ಸ್ಥಳೀಯ ಜನರೆಲ್ಲಾ ಸೇರಿ ಚಪ್ಪಲಿ ಎಸೆದ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಆರೋಪಿಗೆ ತಕ್ಕ ಪಾಠ ಕಲಿಸಲು ಜನರು ಮುಂದಾಗಿದ್ದು ಆ ವೇಳೆ ನಿಯಂತ್ರಣ ಮಾಡಲು ಪೊಲೀಸರು ಹರ ಸಾಹಸ ಪಟ್ಟಿದ್ದಾರೆ.