ಜೋಯಿಡಾ : ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಅತ್ಯುತ್ತಮ ಉದಾಹರಣೆಯಾಗಿ ಜೋಯಿಡಾ ಪೋಲಿಸ್ ಠಾಣೆ ತನ್ನದೇ ಆದ ರೀತಿಯಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಾ ಬರುವ ಮೂಲಕ ಗಮನ ಸೆಳೆಯುತ್ತಿದೆ. ಅಂದಹಾಗೆ ಜೋಯಿಡಾ ತಾಲೂಕು ಕೇಂದ್ರದಲ್ಲಿರುವ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಜೋಯಿಡಾ ಪಿಎಸ್ಐ ಮಹಾದೇವಿ ನಾಯ್ಕವಾಡಿ ಅವರು ಶನಿವಾರ ಸಂಜೆ 7:00 ಗಂಟೆ ಸುಮಾರಿಗೆ ಭೇಟಿ ನೀಡಿ, ವಿದ್ಯಾರ್ಥಿನಿಯರ ಜೊತೆ ಮುಕ್ತವಾಗಿ ಸಂವಾದವನ್ನು ನಡೆಸಿ ಗಮನ ಸೆಳೆದರು. ಕೇವಲ ಇಲಾಖೆಯ ಕಾರ್ಯವೈಖರಿಯ ಜೊತೆ ಜೊತೆಗೆ ಹೆಣ್ಣು ಮಕ್ಕಳ ಸುರಕ್ಷತೆ, ಮತ್ತು ಹೆಣ್ಣು ಮಕ್ಕಳ ಆರೋಗ್ಯ ರಕ್ಷಣೆಯ ಕುರಿತಂತೆ ಮುಕ್ತವಾಗಿ ಸಂವಾದವನ್ನು ನಡೆಸಿದರು.