ಧಾರವಾಡ: ಧಾರವಾಡ ಎನ್ ಟಿ ಎಫ್ ಬಳಿಯಿರುವ ಮಹಾಗಣಪತಿ ದೇವಸ್ಥಾನದಲ್ಲಿದ್ದ ಬೆಳ್ಳಿಯ ವಸ್ತು ಕಳ್ಳತನ ಸಿಸಿಟಿವಿ ದೃಶ್ಯ ವೈರಲ್
ಧಾರವಾಡದ ಎನ್ಟಿಟಿಎಫ್ ಬಳಿ ಇರುವ ಮಹಾ ಗಣಪತಿ ದೇವಸ್ಥಾನದಲ್ಲಿದ್ದ ಬೆಳ್ಳಿಯ ಕಳಶ ಹಾಗೂ ಬೆಳ್ಳಿಯ ತಂಬಿಗೆಯನ್ನು ಕಳ್ಳನೋರ್ವ ತೆಗೆದುಕೊಂಡು ಹೋಗಿದ್ದಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭಾನುವಾರ ಸಂಜೆ 7 ಗಂಟೆಯ ಸುಮಾರಿಗೆ ಕಳ್ಳ ದೇವಸ್ಥಾನ ಪ್ರವೇಶಿಸಿ ಯಾರೂ ಇಲ್ಲದ್ದನ್ನು ಗಮನಿಸಿ ಒಳಗಡೆ ಇದ್ದ ಬೆಳ್ಳಿಯ ಸಾಮಾನುಗಳನ್ನು ತೆಗೆದುಕೊಂಡು ಹೋಗಿದ್ದಾನೆ.