ತಾಳಿಕೋಟಿ: ಪಟ್ಟಣದ ಖತ್ರಿ ಬಜಾರ್ ಬಳಿ ಅನಧಿಕೃತವಾಗಿ ಮಾವಾ ಮಾರಾಟ ಪೊಲೀಸರ ದಾಳಿ : ನಗರದಲ್ಲಿ ಎಸ್ ಪಿ ಲಕ್ಷ್ಮಣ ನಿಂಬರಗಿ
ತಾಳಿಕೋಟಿ ಪಟ್ಟಣದ ಖತ್ರಿ ಬಜಾರ ಹತ್ತಿರ ಮಮದಾಪುರ ಎಂಬಾತ ತನ್ನ ಪಾನ್ ಶಾಪ್ ಅಂಗಡಿಯಲ್ಲಿ ಮಾನವನ ಸೇವೆಗೆ ಹಾನಿಕಾರಕವಾದ ಮಾವಾ ಮಾರಾಟ ಮಾಡುವಾಗ ಪೊಲೀಸರು ದಾಳಿ ನಡೆಸಿ 5.5 ಕೆಜಿ ತಯಾರಿಸಿದ ಮಾವಾ ಅಂದಾಜು ಮೌಲ್ಯ 4,400, 45 ಕೆಜಿ ತಂಬಾಕು ಅಂದಾಜು ಮೌಲ್ಯ 22500, 31ಕೆಜಿಅಡಿಕೆ ಚೂರು ಅಂದಾಜು ಮೌಲ್ಯ 12,400, ನಗದು ಹಣ 12,378 ಹೀಗೆ ಒಟ್ಟು 51,628 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ ಪಿ ನಿಂಬರಗಿ ತಿಳಿಸಿದ್ದಾರೆ.