ಚಾಮರಾಜನಗರ: ಭಾನು ಮುಷ್ತಾಕ್ ದಸರಾ ಚಾಲನೆ : ಸಾಂಸ್ಕೃತಿಕ ಉತ್ಸವಗಳಿಗೆ ಜಾತಿ ತರುವುದು ಬಿಜೆಪಿ ಕೆಲಸ : ನಗರದಲ್ಲಿ ಗ್ಯಾರಂಟಿ ಯೋಜನೆ ರಾಜ್ಯಾಧ್ಯಕ್ಷ ರೇವಣ್ಣ
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ರಾಜ್ಯಾಧ್ಯಕ್ಷ ರೇವಣ್ಣ ಅವರು ಭಾನು ಮುಷ್ತಾಕ್ ದಸರಾ ಚಾಲನೆಗೆ ವಿರೋಧ ವಿಚಾರ ಮಾತನಾಡಿ ಸಾಂಸ್ಕೃತಿಕ ಉತ್ಸವಗಳಿಗೆ ಜಾತಿ ತರುವುದು ಬಿಜೆಪಿಯವರ ಕೆಲಸವಾಗಿದೆ. ಹಿಂದೆ ಗಣಪತಿ ಉತ್ಸವ ವೇಳೆ ಗಲಾಟೆಯಾದರೆ ಎಲ್ಲರನ್ನೂ ಒಗ್ಗೂಡಿಸಿ ಶಾಂತಿ ತರುವ ಕೆಲಸ ಮಾಡಲಾಗುತ್ತಿತ್ತು. ಈಗಿನ ನಾಯಕರು ಬೆಂಕಿಯಿಡುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಮಿರ್ಜಾ ಇಸ್ಮಾಯಿಲ್, ಕವಿ ನಿಸಾರ್ ಅಹಮದ್ ದಸರಾ ಉದ್ಘಾಟಿಸಿದ ಇತಿಹಾಸವಿದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು